ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಟೊಯೋಟಾ ಬೊಶೋಕು ಆಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶನಿವಾರ ಸಿ.ಎಸ್.ಆರ್ ನಿಧಿಯಲ್ಲಿ ಜಿಲ್ಲೆಯ ಪೊಲೀಸರಿಗೆ ರೈನ್ ಕೋಟ್ ಗಳನ್ನು ಸಿದ್ದಪಡಿಸಿ, ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್. ಶ್ರೀನಿವಾಸ್ ಗೌಡ, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಿ.ಎಸ್. ರಾಜೇಂದ್ರ, ಟೊಯೋಟಾ ಬೊಶೋಕು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ರವರಾದ ಶ್ರೀಯುತ ಹೊಂಗೊ, ಟೊಯೋಟಾ ಕಂಪನಿ ವರ್ಗದವರಾದ ಶ್ರೀಮತಿ ರಶ್ಮಿ, ವಿರೇಶ್, ಮಿಯಾಕೆ, ಸುದರ್ಶನ್, ಉಮೇಶ್, ಪ್ರಸನ್ನ ಹಾಗೂ ನಾಗೇಂದ್ರ ರವರ ತಂಡದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.