ವಿಜಯಪುರ ನಗರದಲ್ಲಿ ಸಿದ್ದೇಶ್ವರ ರಥೋತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಾಲನೆ ನೀಡಿದರು. ರಥೋತ್ಸವ ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ಚೌಕವರೆಗೂ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಇನ್ನು ರಥೋತ್ಸವದಲ್ಲಿ ಡೊಳ್ಳು ಕುಣಿತ ಹೆಜ್ಜೆ ಕುಣಿತ ಹಾಗೂ ನಗಾರಿಗಳ ವಾದ್ಯ ಅದ್ದೂರಿಯಾಗಿ ಜರುಗಿತು. ಪ್ರತಿವರ್ಷದಂತೆ ಈ ವರ್ಷವೂ ಸಹ ಸಿದ್ದೇಶ್ವರ ರಥೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿತು ಇನ್ನು ರಥೋತ್ಸವದಲ್ಲಿ ಮಹಿಳೆಯರು ಭಕ್ತಾದಿಗಳು ಭಾಗಿಯಾಗಿದ್ದರು.