ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆ ನೀರುಪಾಲಾಗಿದ್ದ ವ್ಯಕ್ತಿಯ ಶವವನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಪತ್ತೆ ಮಾಡಿರುವ ಘಟನೆ ಮದ್ದೂರು ತಾಲ್ಲೂಕು ಕಾರ್ಕಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಭಾರತೀನಗರ ಸಮೀಪದ ಕಾರ್ಕಳ್ಳಿ ಗ್ರಾಮದ 40 ವರ್ಷದ ರವಿ ಬಿನ್ ಬಸವರಾಜು ಎಂಬುವವರೇ ಸಾವಿಗೀಡಾದ ದುರ್ದೈವಿ ವ್ಯಕ್ತಿಯಾಗಿದ್ದಾರೆ. ಗಣೇಶ ಹಬ್ಬದ ಅಂಗವಾಗಿ ಕಾರ್ಕಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ವಿಸರ್ಜನೆ ಅಂಗವಾಗಿ ಸೋಮವಾರ ಸಂಜೆ ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಕೂಡ ನಡೆಸಲಾಗಿತ್ತು. ಬಳಿಕ ಸೋಮವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ಕ್ಯಾತಘಟ್ಟ ಗ್ರಾಮದ ಬಳಿಯ ಹೆಬ್ಬಾಳ ನಾಲೆಗೆ ವಿಸರ್ಜನೆ ಮಾಡಲು ಸ್ನೇಹಿತ