ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಗುರುವಾರ (ಆಗಸ್ಟ್ 28) ಸತ್ಯ ಸಾಯಿ ಬಾಬಾ ಅವರ 100 ನೇ ಜನ್ಮದಿನೋತ್ಸವದ ಅಂಗವಾಗಿ ನಡೆಯುತ್ತಿರುವ 100 ದಿನಗಳ ವಿಶ್ವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರನ್ನು ಪ್ರೀತಿಸಿ, ಎಲ್ಲರನ್ನೂ ಪ್ರೀತಿಸಿ ಎನ್ನುವ ತತ್ತ್ವ ಇಂದಿನ ಅಗತ್ಯವಾಗಿದೆ. ನಿಜವಾದ ಅರ್ಥದಲ್ಲಿ ನೀವು ದೇವರನ್ನು ಪ್ರೀತಿಸಿದರೆ ನಿಮ್ಮ ಸುತ್ತಮುತ್ತಲಿರುವ ಎಲ್ಲರನ್ನೂ ಪ್ರೀತಿಸುತ್ತೀರಿ ಎಂದು ಧರ್ಮದ ಸಂದೇಶವನ್ನು ಮನದಟ್ಟು ಮಾಡಿಸಿದರು. ಮುದ್ದೇನಹಳ್ಳಿಗೆ ವಿವಿಧ ಧರ್ಮಗಳನ್ನು ಅನುಸರಿಸುತ್ತಿರುವ ಜನರು ಜಗತ್ತಿನ ಮೂಲೆಮೂಲೆಗಳಿಂದ ಬರುತ್ತಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂ, ಯಹೂದಿ ಸೇರಿದಂತೆ ಎಲ್ಲರೂ ಇಲ್ಲಿನ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಬರುತ್ತಿದ್ದಾರೆ.