ಕಲಬುರಗಿ : ಕಲಬುರಗಿ ನಗರದ ಕಪನೂರು ಕೈಗಾರಿಕಾ ಪ್ರದೇಶದಲ್ಲಿನ ಗ್ಯಾಸ್ ಕಂಪನಿಯೊಂದರ ಹಿಂಬದಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿರೋ ಘಟನೆ ನಡೆದಿದ್ದು, ಸೆ10 ರಂದು ಮಧ್ಯಾನ 12.30 ಕ್ಕೆ ಮಾಹಿತಿ ಲಭ್ಯವಾಗಿದೆ. ಖಚಿತ ಮಾಹಿತಿ ಮೇರೆಗೆ ಸಬ್ ಅರ್ಬನ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಜೂಜಾಡುತ್ತಿದ್ದ ಆಸಿಫ್, ಎಂಡಿ ಜಾವಿದ್, ಮೋಹಿನ್, ಮಹ್ಮದ್ ರಶೀದ್, ಎಂಡಿ ಸಿರಾಜ್, ಆಸಿಫ್ ಸೇರಿದಂತೆ 16 ಜನರನ್ನ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹28500 ರೂ ನಗದು ಹಣ ಜಪ್ತಿ ಮಾಡಲಾಗಿದೆ.. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..