ಭೀಮಾತೀರದಲ್ಲಿ ಗುಂಡಿನ ದಾಳಿ ನಡೆದಿದೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ದೇವರನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಮೇಲೆ ಪೈರಿಂಗ್ ನಡೆದಿದೆ. 3ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಲೆ ಹಾಗೂ ಎದೆಗೆ ಗುಂಡುಗಳು ತಗಲಿವೆ. ಇನ್ನು ಹಳೆ ವೈಷಮ್ಯ ಹಿನ್ನೆಲೆ ಈ ಕೃತ್ಯ ಆಗಿದೆ. ಇನ್ನು ಭೀಮಾತೀತದ ಮಹಾದೇವ ಬೈರಗೊಂಡ ಪರಮಾಪ್ತ ಬಿರಾದಾರ ಆಗಿದ್ದರು.ಮೂರರಿಂದ ನಾಲ್ಕು ಜನ ಮುಸುಕುಧಾರಿಗಳಿಂದ ಕೃತ್ಯ ನಡೆದಿದ್ದು, ಗುಂಡು ಹಾರಿಸಿದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ.