ತಾಲೂಕಿನ ಕಲ್ಮಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸಿಹಾಳಹುಡಾ ಗ್ರಾಮದಲ್ಲಿ ಸೊಳ್ಳೆಗಳ ಹತೋಟಿಗಾಗಿ ಆಗಸ್ಟ್ 22 ರ ಶುಕ್ರವಾರ ರಾತ್ರಿ 8 ಗಂಟೆಗೆ ಫಾಗಿಂಗ್ ಮಾಡಲಾಯಿತು. ಇತ್ತೀಚೆಗೆ ಒಂದು ವಾರ ಕಾಲ ನಿರಂತರವಾಗಿ ಮಳೆ ಸುರಿದಿದ್ದರಿಂದ ಎಲ್ಲೆಡೆ ತೇವಾಂಶ ಹೆಚ್ಚಾಗಿದೆ. ಮಳೆ ನೀರು ತಗ್ಗು ಪ್ರದೇಶಗಳಲ್ಲಿ ನಿಂತು ಮಾರಕ ಡೆಂಗೆ ಹರಡುವ ಸೊಳ್ಳೆಗಳು ಉತ್ಪತ್ತಿಯಾಗಿವೆ. ಹಸಿರು ಕೃಷಿ ಪ್ರದೇಶಗಳಲ್ಲಿ ಕುರಿ, ಕೋಳಿ, ಜಾನುವಾರು ಸಾಕಾಣಿಕೆ ಕಾರಣದಿಂದಾಗಿ ಸೊಳ್ಳೆಗಳು ವಿಪರೀತವಾಗಿವೆ. ಹಲವೆಡೆ ಅಸ್ವಚ್ಛತೆಯಿಂದಲೂ ಸೊಳ್ಳೆಗಳು ಉತ್ಪತ್ತಿಯಾಗಿವೆ. ಹೀಗಾಗಿ ಪಂಚಾಯತಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರಿಂದ ಫಾಗಿಂಗ್ ಮಾಡಲಾಯಿತು.