ಕಾಮಸಮುದ್ರಂ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ದೋಣಿಮಡಗು ಗ್ರಾಮದ ಸತೀಶ್‌ರೆಡ್ಡಿ, ಸೀನಪ್ಪ ರವರ ಮನೆಗಳಲ್ಲಿ, ಕುಂದರಸನಹಳ್ಳಿ ಗ್ರಾಮದ ಶ್ರೀ.ಕಾಳಿಕಾಂಭ ದೇವಸ್ಥಾನದಲ್ಲಿ, ಮನೆಗಳಲ್ಲಿ ಕಳ್ಳತನವಾಗಿದ್ದು ಆಗಿದ್ದು ಈ ಬಗ್ಗೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕೆಜಿಎಫ್ ಎಸ್ಪಿ ನೇತೃತ್ವದಲ್ಲಿ ಕಾಮಸಮುದ್ರ ಪೊಲೀಸರು ಕಾರ್ಯಾಚರಣೆ ನಡೆಸಿ,ಆರೋಪಿಗಳಾದ ಕೆ.ಚಿನ್ನಸ್ವಾಮಿ,ಮಣಿ ಎಂಬುವವರನ್ನ ದಸ್ತಗಿರಿ ಮಾಡಿ ಅವರಿಂದ 34 ಗ್ರಾಂ, ಚಿನ್ನದ ಆಭರಣಗಳು, ಅಂದಾಜು ಬೆಲೆ 3,40,000 380 ಗ್ರಾಂ ಬೆಳ್ಳಿಯ ಆಭರಣಗಳು, ಅಂದಾಜು ಬೆಲೆ 38,000/-) ಕೃತ್ಯಕ್ಕೆ ಬಳಸಿರುವ ದ್ವಿ ಚಕ್ರ ವಾಹನವನ್ನು ಅಮಾನತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಸೋಮವಾರ ಕಾಮಸಮುದ್ರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ