ತಾಲೂಕಿನ ದೇವಾಲಯಗಳು ನಾಡು ಪುರಾಣ ಪ್ರಸಿದ್ಧ ಕೈವಾರದಲ್ಲಿ ಸದ್ಗುರು ಯೋಗಿನಾರೇಯನ ಮಠದಲ್ಲಿ ಭಾದ್ರಪದ ಮಾಸದ ಅನಂತನ ಹುಣ್ಣಿಮೆ ಪ್ರಯುಕ್ತ ರಥೋತ್ಸವ ನಡೆಯಿತು. ಸಕಲ ವಾದ್ಯ ಮೇಳದೊಂದಿಗೆ ಯತಿಂದ್ರರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಭಕ್ತರು ರಥವನ್ನು ಎಳೆದರು. ಶ್ರೀ ಮಠದಲ್ಲಿ ಪ್ರಾತಃಕಾಲ ಘಂಟಾನಾದ, ಸುಪ್ರಭಾತ ದೊಂದಿಗೆ ಗೋಪೂಜೆ ಮಾಡಲಾಯಿತು. ಮುಂಜಾನೆ ೯ ಗಂಟೆಗೆ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಭೂದೇವಿ ಸಹಿತ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅಷ್ಟವಧಾನ ಸೇವೆ ಸಲ್ಲಿಸಿ ಮಹಾಮಂಗಳಾರತಿ ಮಾಡಲಾಯಿತು.