ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಬ್ಬರಗಿ ಗ್ರಾಮದಲ್ಲಿನ ಕಪಲೆಪ್ಪ ಜಲಪಾತ ಮೈದುಂಬಿಕೊಂಡು ಹರಿಯುವ ಮೂಲಕ ಪ್ರವಾಸಿಗರನ್ನು ತನ್ನತ್ತ ಕರೆಯುತ್ತಿದೆ. ಅಕ್ಟೋಬರ್ 01 ರಂದಯ ಸಂಜೆ 5-00 ಗಂಟೆಗೆ ಕಪಲೆಪ್ಪ ಜಲಪಾತದಲ್ಲಿ ಪ್ರವಾಸಿಗರು ಜಲಕ್ರೀಡೆ ಆಡಲು ಹೆಚ್ಚಿನ ಸಂಖ್ಯೆಯ ಲ್ಲಿ ಸೇರಿದ್ದಾರೆ. ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಕಪಲೆಪ್ಪ ಜಲಪಾತಕ್ಕೆ ಭೇಟಿ ನೀಡಿ ಸ್ನಾನ ಮಾಡುವ ಮೂಲಕ ಗಮನ ಸೇಳೆದಿದ್ದಾರೆ