ಮದ್ದೂರು ಪಟ್ಟಣದಲ್ಲಿ ನಗರಸಭೆ ಕಟ್ಟಡದಲ್ಲಿ ಅಳವಡಿಸಿರುವ ನಗರಸಭಾ ಕಾರ್ಯಾಲಯದ ನಾಮ ಫಲಕವನ್ನು ಶಾಸಕ ಕೆ.ಎಂ.ಉದಯ್ ಅವರು ಗುರುವಾರ ಅನಾವರಣಗೊಳಿಸಿದರು. ನಂತರ ಶಾಸಕ ಕೆ.ಎಂ.ಉದಯ್ ಅವರು ಮಾತನಾಡಿ, ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೇ ವಿರೋಧ ಮಾಡಿದರು ನಾನು ಎಂದಿಗೂ ರಾಜೀಯಾಗುವುದಿಲ್ಲ ಎಂದು ತಿಳಿಸಿದರು. ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೇ ಅದನ್ನು ವಿರೋಧ ಮಾಡೋದು ಕ್ಷೇತ್ರದಲ್ಲಿ ಮಾಮೂಲಿಯಾಗಿದೆ. ನನಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತ ಮುಖ್ಯವಾಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಅನುದಾನ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಮದ್ದೂರು ಪುರಸಭೆ ವ್ಯಾಪ್ತಿಗೆ ಗೆ