ಹಳಿಯಾಳ : ಪಟ್ಟಣದಲ್ಲೆಡೆ ಚೌತಿ ಸಂಭ್ರಮ ಮನೆ ಮಾಡಿದೆ. ಹಿಂದೂ ಧರ್ಮ ಬಾಂಧವರ ಬಹುತೇಕ ಮನೆಗಳಲ್ಲಿ ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿ ಆರಾಧಿಸಲಾಗಿದೆ. ಪಟ್ಟಣದ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಪ್ರಕಾರಗಳಲ್ಲಿ ಆರಾಧನೆಯನ್ನು ಮಾಡುತ್ತಿದ್ದಾರೆ. ಚೌತಿಯ 5ನೇ ದಿನವಾದ ಭಾನುವಾರ ಹಳಿಯಾಳ ಪಟ್ಟಣದ ಬಹುತೇಕ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶನ ಭವ್ಯ ವಿಸರ್ಜನಾ ಮೆರವಣಿಗೆಯು ನಡೆಯಿತು.