ಮಳವಳ್ಳಿ : ಬಲವಾದ ಆಯುಧ ದಿಂದ ಹೊಡೆದು ಯುವಕನೊಬ್ಬ ನನ್ನು ಕೊಲೆ ಮಾಡಿರುವ ಕೃತ್ಯ ವೊಂದು ಮಳವಳ್ಳಿ ತಾಲ್ಲೂಕಿನ ರಾಮಂದೂರು ಗ್ರಾಮದ ಬಳಿ ಜರುಗಿದೆ. ತಾಲ್ಲೂಕಿನ ಕಲ್ಕುಣಿ ಗ್ರಾಮದ ವಾಸಿ ಶಿವಸ್ವಾಮಿ ಎಂಬುವರ ಮಗನಾದ 21 ವರ್ಷದ ಮಂಜು ಎಂಬಾತನೇ ಕೊಲೆಗೀಡಾಗಿರುವ ಯುವಕನಾಗಿದ್ದು ಮಂಗಳವಾರ ಸಂಜೆ 8.30 ರ ಸಮಯದಲ್ಲಿ ಈ ಘಟನೆ ಜರುಗಿದೆ. ರಾಮಂದೂರು ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬಿಡಲು ರಾತ್ರಿ 7.30 ರ ಸಮಯ ದಲ್ಲಿ ತನ್ನ ಆಟೋದಲ್ಲಿ ಬಲೆ ಇನ್ನಿತರ ಪರಿಕರಗಳ ಸಮೇತ ಕಲ್ಕುಣಿ ಗ್ರಾಮದ ಪುಟ್ಟಸ್ವಾಮಿ ಎಂಬುವರ ಜೊತೆ ತೆರೆಳಿ ಕೆರೆಗೆ ಬಲೆ ಬಿಟ್ಟು ಆಟೋದಲ್ಲಿ ವಾಪಸ್ ಬರುತ್ತಿದ್ದ ವೇಳೆ ಯಾರೋ ದುಷ್ಕ ರ್ಮಿಗಳು ಬಲವಾದ ಆಯುಧ ದಿಂದ ಮಂಜು ವಿನ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿ ಯಾಗಿದ್ದಾರೆ ಎನ್ನಲಾಗಿದೆ.