ದಟ್ಟ ಕಾಡಿನ ನಡುವೆ ನೂರಾರು ಅಡಿ ಎತ್ತರ ಬಂಡೆಕಲ್ಲುಗಳ ಮೇಲಿನಿಂದ ಹಾಲ್ನೊರೆಯಂತೆ ಧುಮ್ಮಿಕ್ಕಿ ಭೋರ್ಗರೆಯುತ್ತಿರುವ ಕಾಮೇನಹಳ್ಳಿ ಫಾಲ್ಸ್ ನೋಡಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕುಮಾರಗಿರಿ ಸಮೀಪವಿರುವ ಕಾಮೇನಹಳ್ಳಿ ಫಾಲ್ಸ್ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.