ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶ್ರೀ ಸಾರ್ವಜನಿಕ ಗಣಪತಿ ಸೇವಾ ಸಮಿತಿಯ ವತಿಯಿಂದ ಇಟ್ಟಿದ್ದ ಗಣಪತಿಯ ವಿಸರ್ಜನಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶೃಂಗೇರಿ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಕೂಡ ವಾದ್ಯಗೋಷ್ಠಿಯ ನಾದ ಸದ್ದು ಮಾಡಿತ್ತು. ಡಿಜೆ ಸೌಂಡ್ ಸಿಸ್ಟಮ್ ನಿಷೇಧ ಹೇಳಿದ ಬೆನ್ನಲ್ಲೇ ಸಾಂಪ್ರದಾಯಿಕ ವಾದ್ಯಗೋಷ್ಠಿಗಳ ಮೊರೆ ಹೋಗುತ್ತಿರುವುದು ಸಂಗೀತಪ್ರಿಯರನ್ನು ಮತ್ತಷ್ಟು ಉರಿದುಂಬಿಸುವಂತಿದೆ.