ಮಂಗಳವಾರ ಮೋಡ ಮುಸುಕಿದ ವಾತಾವರಣ ಉಂಟಾಗಿದ್ದು ಜಿಟಿಜಿಟಿ ಮಳೆ ಸುರಿಯುತ್ತಿದೆ. ಈಗಾಗಲೇ ಕಳೆದ ಎರಡು ವಾರಗಳಿಂದಲೂ ಜಿಟಿ ಜಿಟಿ ಮಳೆಯಾಗುತ್ತಿದ್ದು, ಬಿಸಿಲೂರಿನಲ್ಲಿ ಮಲೆನಾಡಿನ ವಾತಾವರಣ ಉಂಟಾಗಿದೆ. ಜನಸಂಚಾರಕ್ಕೆ ಜಿಟಿ ಜಿಟಿ ಮಳೆ ಅಡ್ಡಿಯಾಗಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತೇವಾಂಶ ಹೆಚ್ಚಳದಿಂದಾಗಿ ಬೆಳೆಗಳಿಗೆ ಹಸಿರು ಕೀಟಬಾಧೆ ಹೆಚ್ಚಾಗತೊಡಗಿದೆ. ಹತ್ತಿ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಬಿಸಿಲು ಬೀಳದ ಕಾರಣ ಕಳೆನಿರ್ವಹಣೆ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕಳೆ ತೆಗೆಯಲು, ಕೀಟನಾಶಕ ಸಿಂಪಡಣೆ ಮಾಡಲು ಮತ್ತು ಕುಂಟೆ ಹೊಡೆಯಲು ಕೂಡ ಮಳೆರಾಯ ಬಿಡುವು ನೀಡುತ್ತಿಲ್ಲ ಎಂಬುದು ರೈತರ ಅಭಿಪ್ರಾಯ.