ಲಾರಿ ಎತ್ತಿನ ಗಾಡಿಗೆ ಮತ್ತು ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡು ಎತ್ತಿಗೆ ಗಂಭೀರವಾಗಿ ಪೆಟ್ಟುಬಿದ್ದಿರುವ ಘಟನೆ ಮದ್ದೂರು ತಾಲ್ಲೂಕು ಭಾರತೀನಗರದ ಹೆದ್ದಾರಿಯಲ್ಲಿ ನಡೆದಿದೆ. ಭಾರತೀನಗರದ ಮದ್ದೂರು -ಮಳವಳ್ಳಿ ಹೆದ್ದಾರಿಯ ಹಲಗೂರು ವೃತ್ತದ ಬಳಿ ಕಬ್ಬು ತುಂಬಿಕೊಂಡು ಸಾಗಿಸುತ್ತಿದ್ದ ಎತ್ತಿನ ಗಾಡಿಗೆ ಮತ್ತು ಮದ್ದೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಬ್ಬು ತುಂಬಿದ ಎತ್ತಿನ ಗಾಡಿಯಲ್ಲಿದ್ದ ಕಬ್ಬು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಎತ್ತಿಗೆ ಪೆಟ್ಟುಬಿದ್ದಿದೆ. ಮತ್ತೆ ಲಾರಿ ಹಾಗೆ ನಿಲ್ಲಿಸದೆ ಮುಂದೆ ಚಲಿಸುತ್ತಿದ್ದರಿಂದ ಕಾರಿಗೂ ಸಹ ಡಿಕ್ಕಿಹೊಡೆದಿದೆ. ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊ