ಸ್ಥಳೀಯ ಇಜಾರಿಲಕಮಾಪುರದಲ್ಲಿ ಹಳೇ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ 18 ಎಕರೆ ಜಮೀನಿನಲ್ಲಿದ್ದ ನಿವೇಶನಗಳನ್ನು ಹಾವೇರಿ ತಾಲೂಕು ಸುವರ್ಣಕಾರರ ಕೈಗಾರಿಕಾ ಕೆಲಸಗಾರರ ಸಹಕಾರ ಸಂಘದವರು ಹೊಟ್ಟಿದಾಖಲೆ ಸೃಷ್ಟಿಸಿ ಬೇರೆಯವರಿಗೆ ನೋಂದಣಿ ಮಾಡಿಕೊಟ್ಟಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ ಎಂದು ಮುಖಂಡ ವೆಂಕಟೇಶ ದೈವಜ್ಞ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಜಾರಿ ಲಕಮಾಪುರ ಗ್ರಾಮ ಪಂಚಾಯಿತಿಯಿಂದ 128 ಜನರಿಗೆ ಮಂಜೂರಾಗಿದ್ದ ನಿವೇಶನಗಳಿದ್ದ ಜಮೀನನ್ನೇ ಸಂಘದವರು ತಮ್ಮದೆಂದು ಹೇಳಿ ಮಾರಾಟ ಮಾಡಿದ್ದಾರೆ ಎಂದು ದೂರಿದರು. ನಿವೇಶನ ಹಂಚಿಕೆ ವಿಚಾರವಾಗಿ ಇತ್ತೀಚೆಗೆ ಹೈಕೋರ್ಟ್ ಸಹ ಆದೇಶ ಹೊರಡಿಸಿದೆ.