ಗೋವುಗಳನ್ನ ರಕ್ಷಣೆ ಮಾಡುವ ಉದ್ದೇಶದಿಂದ ನೂತನವಾಗಿ ಗೋವರ್ಧನ ಟ್ರಸ್ಟ್ ಉದ್ಘಾಟನಾ ಸಮಾರಂಭದ ಹಿನ್ನೆಲೆ ಶಿವಮೊಗ್ಗದ ಶೃಂಗೇರಿ ಶಂಕರ ಮಠದಿಂದ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಮೂಲಕ ಶೋಭಾ ಯಾತ್ರೆಯನ್ನ ಬುಧವಾರ ನಡೆಸಲಾಯಿತು.ಈ ಶೋಭಾ ಯಾತ್ರೆಯ ನೇತೃತ್ವವನ್ನ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ವಹಿಸಿಕೊಂಡಿದ್ದರು. ಶೋಭಾ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.