ಮಳವಳ್ಳಿ ತಾಲ್ಲೂಕಿನ ಹಲಗೂರಿನ ಅಂಚೆ ಕಛೇರಿಯ ಸಿಬ್ಬಂದಿಯವರು ಬ್ಯಾಂಕುಗಳಿಗೆ ಹಾಗೂ ಸಾರ್ವಜನಿಕರಿಗೆ ಅಂಚೆ ಮಹಾ ಉದ್ಯಮ ಸಪ್ತಾಹ ಪಾರ್ಸಲ್ ವ್ಯವಹಾರ ಪ್ರೋತ್ಸಾಹ ಬಗ್ಗೆ ಮತ್ತು ಅಂಚೆ ಕಛೇರಿಯಲ್ಲಿರುವ ಸೇವೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಲಗೂರಿನ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಅಂಚೆ ಕಚೇರಿಯ ಸಿಬ್ಬಂದಿ ಡಿ.ಎಸ್.ತೇಜಾನಂದ್ ಭೇಟಿ ನೀಡಿ, ಎಂ.ಡಿ.ಸಿ.ಸಿ .ಬ್ಯಾಂಕಿನ ವ್ಯವಸ್ಥಾಪಕರಾದ ವಿಜಯಕುಮಾರ್ ಅವರಿಗೆ ಅಂಚೆ ಕಚೇರಿಯ ಕರಪತ್ರವನ್ನು ವಿತರಿಸಿ, ನಮ್ಮ ಕಚೇರಿಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ಎಂ.ಡಿ.ಸಿ.ಸಿ .ಬ್ಯಾಂಕಿನ ವ್ಯವಸ್ಥಾಪಕರಾದ ವಿಜಯಕುಮಾರ್ ಅವರು ಗುರುವಾರ ಸಂಜೆ 4 ಗಂಟೆಯಲ್ಲಿ ಮಾತನಾಡಿ, ಗ್ರಾಹಕರಿಗೆ ಇಂಡಿಯಾ ಪೋಸ್ಟ್