ಸೆ.6 ರಂದು ನಗರಸಭೆ ಸಾಮಾನ್ಯ ಸಭೆಯನ್ನ ಹಮ್ಮಿಕೊಳ್ಳಲಾಗಿದೆ. ಬುದವಾರ ಸಂಜೆ 5 ಗಂಟೆಗೆ ಈ ಬಗ್ಗೆ ನಗರದಭೆ ವತಿಯಿಂದ ಪ್ರಕಟಣೆ ನೀಡಿದ್ದಾರೆ. ಇನ್ನೂ ಸೆಪ್ಟೆಂಬರ್ 6 ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ, ನಗರಸಭೆ ಅಧ್ಯಕ್ಷೆ ಶಕೀಲಾಬಾನು ರವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದ್ದು ನಗರಸಭೆಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ನಗರಸಭೆಯ ಸದಸ್ಯರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.