ಖೇಲೋ ಇಂಡಿಯಾ ಮೂಲಕ ಜನರನ್ನ ಸಂಸದರು ಮಂಗ ಮಾಡ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಸಂಸದ ಬಿ ವೈ ರಾಘವೇಂದ್ರ ಅವರ ವಿರುದ್ಧ ಆರೋಪಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆಹರು ಕ್ರೀಡಾಂಗಣದ ಮುಂದೆ ಭೇಟಿ ಬಚಾವೋ. ಭೇಟಿ ಪಡಾವೋ ಅಂತ ಹಾಕಿದ್ದಾರೆ. ನಿಮ್ಮ ಮಕ್ಕಳಿಗೆ ಖರ್ಚು ಮಾಡಿ ನೀವು ಓದಿಸುತ್ತೀರಾ. ಆದ್ರೆ ಇವರು ಫ್ಲೇಕ್ಸ್ ಹಾಕಿಕೊಂಡು ಫೋಸ್ ಕೊಡ್ತಾರೆ. ಕಸ ನಿಮ್ಮದು, ಪೊರಕೆ ನಿಮ್ಮದು ಆದರೆ ಸ್ವಚ್ಛ ಭಾರತ ಅಭಿಯಾನ್ ಕಾರ್ಯಕ್ರಮ ಅವರದ್ದು. ಅದೇ ರೀತಿ ಖೇಲೋ ಇಂಡಿಯಾ ಕೂಡ ಆಗಿದೆ ಇದನ್ನ ಇಟ್ಟುಕೊಂಡು ಸಂಸದ ರಾಘವೇಂದ್ರ ಫೋಸ್ ಕೊಡ್ತಿದ್ದಾರೆ ಎಂದರು.