ಕೌಟುಂಬಿಕ ಕಲಹ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ವ್ಯಕ್ತಿಯೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವರಾಜ ದುರ್ಗದ (38) ಮೃತ ದುರ್ದೈವಿ. ಈತ ಕಳೆದ ಒಂಭತ್ತು ವರ್ಷದ ಹಿಂದೆ ರಾಣೇಬೆನ್ನೂರ ತಾಲೂಕು ನಂದಿಹಳ್ಳಿ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿದ್ದು, ಆರಂಭದಲ್ಲಿ ಅನ್ನೋನ್ಯವಾಗಿಯೇ ಜೀವನ ನಡೆಸಿದ್ದರು. ಬಳಿಕ ಗಂಡ ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಕಳೆದ ಎರಡೂರು ವರ್ಷದ ಹಿಂದೆ ಯುವತಿ ತನ್ನ ಮಗನೊಂದಿಗೆ ತವರು ಮನೆ ಸೇರಿದ್ದಳು. ಬಳಿಕ ಜೀವನ ನಿರ್ವಹಣೆಗಾಗಿ ಗಂಡನ ವಿರುದ್ಧಜೀವಾನಂಶ ಕೊಡಿಸುವಂತೆ ಒತ್ತಾಯಿಸಿ ಕೋರ್ಟ್ ಮೆಟ್ಟಿಲೇರಿದ್ದರಿಂದ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.