ಚಾಮರಾಜನಗರ:ತಾಲೂಕಿನ ಚಂದಕವಾಡಿ ಬ್ರಿಡ್ಜ್ ಬಳಿ ಶನಿವಾರ ರಾತ್ರಿ11ರ ವೇಳೆ ನಡೆದ ಬೈಕ್ ಅಪಘಾತದಲ್ಲಿ ಓರ್ವ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಕೆಎ–10 ಕೆ–1187 ಸಂಖ್ಯೆಯ 'ಫ್ಯಾಷನ್ ಪ್ಲಸ್' ಬೈಕಿನಲ್ಲಿ ಚಂದಕವಾಡಿ ಮೂಲದ ಸವಾರ ಓಡಿಸುತ್ತಿದ್ದ ವೇಳೆ, ಬೈಕ್‌ನ ನಿಯಂತ್ರಣ ತಪ್ಪಿ ಸೇತುವೆ ಬಳಿ ಗುದಿದ್ದು ಈ ವೇಳೆ ಆತನಿಗೆ ತೀವ್ರ ಗಾಯಗಳಾಗಿದ್ದವು. ಘಟನೆಯು ನಡೆದ ಕೂಡಲೇ, ಸ್ಥಳೀಯರಾದ ನಂದಕುಮಾರ್ ಎಂಬಾತ ತನ್ನ ವಾಹನದ ಮೂಲಕ ಗಾಯಾಳುವನ್ನು ಚಾಮರಾಜನಗರ ಹಳೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಿದರು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಗಾಯಾಳುವನ್ನು ಸೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ