ಹಾಸನ : ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿದ ದೈತ್ಯಾಕಾರದ ಒಂಟಿಸಲಗ ವಾಹನಗಳ ಓಡಾಟಕ್ಕೆ ಅಡ್ಡಿ ಮಾಡಿದ ಘಟನೆ ಸಕಲೇಶಪುರ ತಾಲ್ಲೂಕಿನ, ಹಳ್ಳಿಬೈಲು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಬೈನೆ ಮರ ನೆಲಕ್ಕುರುಳಿಸಿ ತಿನ್ನುತ್ತಾ ನಿಂತ ಕಾಡಾನೆಯಿಂದಾಗಿ ಕೆಲಕಾಲ ರಸ್ತೆಯಲ್ಲಿಯೇ ವಾಹನಗಳು ನಿಲ್ಲುವಂತೆ ಆಯಿತು, ಮಳೆಯ ನಡುವೆ ರಸ್ತೆಯಲ್ಲೇ ನಿಂತು ವಾಹನ ಸವಾರರು ಪರದಾಡಿದ್ದು ವಿಡಿಯೋ ಮಾಡಿ ವಾಹನ ಚಾಲಕರು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿದ ಅರಣ್ಯ ಇಟಿಎಫ್ ಸಿಬ್ಬಂದಿ ಕೆಲಸಕ್ಕೆ ಒಂಟಿ ಸಲಗ ಕಾಡಿನೊಳಗೆ ಹೋಗಿದೆ ನಂತರ ಸುರಿಯುತ್ತಿರುವ ಮಳೆಯಲ್ಲಿಯೇ ಮರ ತೆರವುಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.