ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಇರುವ ಚೌದರಿ ಗಾರ್ಮೆಂಟ್ಸ್ ಮುಂಭಾಗದಲ್ಲಿ ನೂರಾರು ಮಹಿಳಾ ಕಾರ್ಮಿಕರು ಇಂದು ಬೆಳಗ್ಗೆಯಿಂದ ಇಲ್ಲೇ ಬೀಡು ಬಿಟ್ಟಿದ್ದೇವೆ,ಇವರ ನಡವಳಿಕೆ ನೋಡುತ್ತಿದ್ದರೆ ಕಾರ್ಮಿಕರಿಗೆ ದ್ರೋಹ ಮಾಡಿ ಗಾರ್ಮೆಂಟ್ಸ್ ಬೇರೆ ಅವರಿಗೆ ಮಾರಾಟ ಮಾಡುತ್ತಿದ್ದಾರೇನೋ ಅನ್ನುವ ಅನುಮಾನ ಕಾಡುತ್ತಿದೆ ಹಾಗಾಗಿ ನಾವು ಚೌದರಿ ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡುವ ಪರಸ್ಥಿತಿ ಎದುರಾಗಿದೆ.ಕೆಲ ದಿನಗಳಿಂದ ನಮ್ಮನ್ನು ಗುಂಪು ಗುಂಪುಗಳಾಗಿ ಕೆಲಸದಿಂದ ತೆಗೆತುತ್ತಿದ್ದಾರೆ.ಕಾರಣ ನಮಗೆ ತಿಳಿದು ಬಂದಿಲ್ಲ ಅವರ ನಡೆ ನಮಗೆ ಅರ್ಥವೂ ಆಗುತ್ತಿಲ್ಲ ಇದರ ಜೊತೆಗೆ ನಮಗೆ ಗಾರ್ಮೆಂಟ್ಸ್ ಅಲ್ಲಿ ಕೆಲಸ ನೀಡುತ್ತಾರೆ ಎಂಬುವ ನಂಬಿಕೆ ಕಳೆದುಕೊಂಡಿದ್ದೇವೆ.