ಹಾವೇರಿಯ ಜೈನಬಸದಿಯಲ್ಲಿ ಜೈನಮುನಿ ಶ್ರೀ ೧೦೮ ವಿದಿತಸಾಗರ ಮಹಮುನಿಗಳ ೭ ದೀಕ್ಷಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜೈನಮುನಿ ವಿದಿತಸಾಗರ ಮಹಾಮುನಿಗಳು ಧರ್ನಸ್ಥಳದ ಅಪಪ್ರಚಾರದ ಬಗ್ಗೆ ಮಾತನಾಡಿದರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಸತ್ಯಾಸತ್ಯತೆ ಮುಚ್ಚಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹಿಂದೂಗಳು ಅಂದರೆ ಹಿಂಸೆಯಿಂದ ದೂರ ಇದ್ದವರು ಎಂದು ಅರ್ಥ ಎಂದು ಜೈನಮುನಿಗಳು ತಿಳಿಸಿದರು.