ಕಲಬುರಗಿ : ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಜಮೀನುವೊಂದರಲ್ಲಿ ತರಕಾರಿ ಕಡಿಯುತ್ತಿದ್ದ ಒಂಟಿ ಮಹಿಳೆಯ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಫರಹತ್ತಬಾದ್ ಠಾಣೆ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪರ ಹೇಳಿದ್ದಾರೆ.. ಸೆ11 ರಂದು ಮಧ್ಯಾನ 12 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಕಲ್ಲಾಲಿಂಗ್ ಹಾಗೂ ಮಹೇಶ್ ರಾಠೋಡ್ ಸೇರಿದಂತೆ ಇಬ್ಬರನ್ನ ಬಂಧಿಸಲಾಗಿದೆ. ಬಂಧಿತರಿಂದ 2 ಲಕ್ಷ ಮೌಲ್ಯದ 20 ಗ್ರಾಮ್‌ನ 2 ಚಿನ್ನದ ತಾಳಿ ಸರಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ.. ಇನ್ನೂ ಈ ಖಧೀಮರು ಬುರ್ಖಾ ಧರಿಸಿ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನ ಸುಲಿಗೆ ಮಾಡಿದ್ದರೆಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ..