ದಾಂಡೇಲಿ : ನಗರದಲ್ಲಿ ನೂತನವಾಗಿ ದಾಂಡೇಲಿ ಕ್ರೈಸ್ತ ತೆಲುಗು ಸಮಾಜಂ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು, ಈ ಬಗ್ಗೆ ಬುಧವಾರ ಸಂಜೆ ಆರುವರೆ ಗಂಟೆ ಸುಮಾರಿಗೆ ನಗರದ ಪ್ರವಾಸಿ ಮಂದಿರದಲ್ಲಿ ದಾಂಡೇಲಿ ಕ್ರೈಸ್ತ ತೆಲುಗು ಸಮಾಜಂ ಟ್ರಸ್ಟ್ ನ ಪದಾಧಿಕಾರಿಗಳು ಸಭೆ ನಡೆಸಿ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ. ದಾಂಡೇಲಿ ಕ್ರೈಸ್ತ ತೆಲುಗು ಸಮಾಜಂ ಟ್ರಸ್ಟಿನ ಅಧ್ಯಕ್ಷರಾಗಿ ಟೈಟಸ್ ಬಿಲ್ಲಾ ಹಾಗೂ ಉಪಾಧ್ಯಕ್ಷರಾಗಿ ಮಾನವ ಹಕ್ಕುಗಳ ಸಂಘಟನೆಯ ರತ್ನಂ.ಡಿ. ಬಂಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾಗಿ ಡ್ಯಾನಿಯಲ್ ಡಿ.ಗೋನಾ ಹಾಗೂ ಸಹ ಕಾರ್ಯದರ್ಶಿಯಾಗಿ ಹನ್ನಮ್ಮ ವಿ.ಇಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.