ಕಲಬುರಗಿ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದ ರಾಮತೀರ್ಥ ಬಡಾವಣೆಯಲ್ಲಿ ನಡೆದಿದ್ದು, ಸೆ ೫ ರಂದು ಮಧ್ಯಾನ 1 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ನಗರದ ಜೆಸಿಬಿ ಶೋರೂಂನಲ್ಲಿ ಸೆಲ್ಸ್‌ಮ್ಯಾನ್ ಆಗಿ ಕೆಲಸ ಮಾಡ್ತಿದ್ದ ರವಿಕಾಂತ್ ಪಾಟೀಲ್ ಮನೆಯಲ್ಲೆ ಫ್ಯಾನ್‌ಗೆ ಸಿರೇಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಇನ್ನೂ ಕುಡಿಬ್ಯಾಡ ಕುಡಿಬ್ಯಾಡ.. ಮೂವರು ಹೆಣ್ಮಕ್ಕಳಿದಾರೆ ಅಂತಾ ಪತ್ನಿ ಸಾಕಷ್ಟು ಬುದ್ದಿವಾದ ಹೇಳಿದ್ರು ಸಹ, ಕುಡಿತದ ಚಟಕ್ಕೆ ಅಂಟಿಕೊಂಡು ಆತ್ಮಹತ್ಯೆ ಮಾಡಿಕೊಂಡು ಪತ್ನಿ ಮತ್ತು ಮಕ್ಕಳನ್ನ ಅನಾಥವನ್ನಾಗಿ ಮಾಡಿದ್ದಾನೆ. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.