ಮೇಜರ್ ಧ್ಯಾನ್‌ಚಂದ್ ರವರ ಜಯಂತಿ ಹಿನ್ನೆಲೆ ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಮತ್ತು 'ಸಂಸದ್ ಕ್ರೀಡಾ ಮಹೋತ್ಸವ'ವನ್ನು ಶುಕ್ರವಾರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಉದ್ಘಾಟಿಸಿದರು.ಭಾರತ ಹೋಕಿಯ ಜಾದುಗಾರರಾದ ಮೇಜರ್ ಧ್ಯಾನ್‌ಚಂದ್ ಅವರ ತ್ಯಾಗ, ಶ್ರಮ ಮತ್ತು ದೇಶಕ್ಕಾಗಿ ನೀಡಿದ ಅಪಾರ ಕೊಡುಗೆಯನ್ನು ಸ್ಮಸ್ಮರಿಸಿ, ಅವರ ಜೀವನವೇ ಕ್ರೀಡೆಯ ಮಾದರಿ, ಶಿಸ್ತಿನ ಪಾಠ ಮತ್ತು ರಾಷ್ಟ್ರಭಕ್ತಿಯ ಸಂಕೇತವಾಗಿದೆ ಎಂದರು.