18/02/2024 ರಂದು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಜನದಟ್ಟಣೆಯಲ್ಲಿ ಪ್ರಯಾಣಿಕರು ಬಸ್‌ನಿಂದ ಇಳಿಯುವ ಸಂದರ್ಭದಲ್ಲಿ ಯಾರೋ ಆರೋಪಿತರು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದು ಈ ಬಗ್ಗೆ ಜ್ಯೋತಿ ರಾಮಗೌಡ ಪಾಟೀಲ ಇವರು ನೀಡಿದ ದೂರಿನ ಆಧಾರದ ಮೇಲೆ ಸದರಿ ಪ್ರಕರಣ ಮತ್ತು ಇತ್ತಿಚೀನ ದಿನಗಳಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳ್ಳತನಕ್ಕೆ ಹೋದ ಮಾಲು & ಆರೋಪಿತರ ಪತ್ತೆ ಹಚ್ಚುವ ನಿಟ್ಟಿನಲ್ಲಿ ಆರೋಪಿ ಮೋನಿಶಾ ಮನಿಗಂಡನ್ ಎನ್ನುವ 28 ವರ್ಷ ತಮಿಳುನಾಡು ರಾಜ್ಯದ ಮಹಿಳೆಯನ್ನ ಬಂಧಿಸಿ ಮಹಿಳೆ ಹತ್ತಿರ 5,65,000/- ಹಣ ವಶಕ್ಕೆ ಪಡೆದು ಇಂದು ಶುಕ್ರವಾರ 6 ಗಂಟೆಗೆ ತನಿಖೆ ಕೈಗೊಂಡಿದ್ದಾರೆ.