ಮದ್ದೂರು ತಾಲ್ಲೂಕು ಶೆಟ್ಟಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕರಡಕೆರೆ ಗ್ರಾಮದಲ್ಲಿ ನಡೆದ 6 ಗ್ರಾಮ ಘಟಕಗಳ ಸಮ್ಮೇಳನ ಕಾರ್ಯಕ್ರಮದ ಧ್ವಜಾರೋಹಣವನ್ನು ಗ್ರಾಮದ ಹಿರಿಯ ಮುಖಂಡರಾದ ಭಾಗ್ಯಮ್ಮ ಅವರು ನೆರವೇರಿಸಿದರು. ನಂತರ ಭಾಗ್ಯಮ್ಮ ಅವರು ಮಾತನಾಡಿ, ಕೂಲಿಕಾರರ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕಾಗಿದೆ. ಜೊತೆಗೆ ಕೆ.ಎಂ.ದೊಡ್ಡಿ ಮಾರ್ಗವಾಗಿ ಕರಡಕೆರೆ, ಅರೆಚಾಕನಹಳ್ಳಿ, ಕಾಡುಕೊತ್ತನಹಳ್ಳಿ, ಭುಜುವಳ್ಳಿ, ಕಪರೇಕೊಪ್ಪಲು ಗ್ರಾಮಗಳಿಗೆ ಸಾರಿಗೆ ಬಸ್ ಸೌಲಭ್ಯವನ್ನು ಒದಗಿಸಿಕೊಡಬೇಕು. ಜೊತೆಗೆ ಗ್ರಾಮದಲ್ಲಿ ರಸ್ತೆ ರಿಪೇರಿ, ಸ್ಮಶಾನ, ಚರಂಡಿ ಅಭಿವೃದ್ದಿ ಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು. ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ಪಿ.ಅ