ಮದ್ದೂರು ತಾಲ್ಲೂಕು ಭಾರತೀನಗರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ಭಯದಿಂದಲೇ ಸಂಚರಿಸಬೇಕಾದ ವಾತಾವರಣದ ನಿರ್ಮಾಣವಾಗಿದೆ. ಭಾರತೀನಗರದ ಮಾರಿಗುಡಿ ರಸ್ತೆ, ಮಾದೇಗೌಡ ಬಡಾವಣೆ, ದೇವರಹಳ್ಳಿ ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿ, ಹಲಗೂರು ರಸ್ತೆ ಹಾಗೂ 4ನೇ ವಾರ್ಡ್ ಗಣೇಶನ ದೇವಾಲಯದ ಸುತ್ತಮುತ್ತಲು ನೂರಾರು ಸಂಖ್ಯೆಯಲ್ಲಿ ಬೀದಿನಾಯಿಗಳು ಸಂಚರಿಸುತ್ತಿದ್ದು ಇದನ್ನು ಕಡಿವಾಣ ಹಾಕಲು ಗ್ರಾಮಪಂಚಾಯಿತಿ ವಿಫಲವಾಗಿದೆ. ಬಹುತೇಕ ಎಲ್ಲೆಡೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ರಸ್ತೆ ಅಪಘಾತಗಳೂ ಹೆಚ್ಚಾಗಿತ್ತಿವೆ. ಇಷ್ಟಾದರೂ ಭಾರ