ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಧಿನಾಪುರ ಬಳಿ ಬುಧವಾರ ರಾತ್ರಿ 2 ಬೈಕುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೊಬ್ಬ ಸಾವನಪ್ಪಿ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಯಾದಗಿರಿ ಜಲಿಯ ಶಹಪುರ ತಾಲೂಕಿನ ಮದರ್ಕಿ ಗ್ರಾಮದ ಯುವಕ ಮಹದೇವ ಹೂಗಾರ ಹಟ್ಟಿ ಪಟ್ಟಣದ ತಮ್ಮ ಸಂಬಂಧಿಕರ ಮನೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಇರುತ್ತಿದ್ದ, ಬುಧವಾರ ರಾತ್ರಿ ಹಟ್ಟಿಯಿಂದ ಲಿಂಗಸುಗೂರಿಗೆ ಹೋಗಲು ಬೈಕ್ ಮೇಲೆ ಹೋಗುವಾಗ ಮೇದಿನಾಪುರ ಬಳಿ ಎರಡು ಬೈಕುಗಳ ಮಧ್ಯೆ ಡಿಕ್ಕಿ ಸಂಭವಿಸಿದೆ, ನಂತರ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.