ರಾಜ್ಯಾದ್ಯಂತ ರಸ್ತೆಗಳು ಗುಂಡಿ ಬಿದ್ದಿದ್ದು ವಾಹನ ಸವಾರರು ಪರದಾಟ ಪಡುತ್ತಿರುವ ಬೆನ್ನಲ್ಲೇ ಸ್ಥಳೀಯ ಕಲಾವಿದರಿಬ್ಬರು ಯಮಧರ್ಮ ಮತ್ತು ಚಿತ್ರಗುಪ್ತರ ವೇಷ ಧರಿಸಿ ರಸ್ತೆಯ ಗುಂಡಿಗಳ ಲೆಕ್ಕವನ್ನು ಬರೆದುಕೊಂಡಿದ್ದು. ರಸ್ತೆಯ ಗುಂಡಿಗಳ ಆಳ, ಅಗಲ ಮತ್ತು ಉದ್ದವನ್ನು ಬರೆದುಕೊಂಡಿದ್ದು. ಎಲ್ಲಾ ಪಾಪ - ಪುಣ್ಯಗಳ ಲೆಕ್ಕವನ್ನು ಸರ್ಕಾರದ ಲೆಕ್ಕಕ್ಕೆ ಬರೆದು ಇಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮದ ಬಳಿ ಈ ದೃಶ್ಯ ಕಂಡು ಬಂದಿದೆ