ಚಾಮರಾಜನಗರದ ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರ ದೂರು ಬಂದ ಹಿನ್ನೆಲೆ ಲೋಕಾಯುಕ್ತಾ ಅಧಿಕಾರಿಗಳು ನಗರಸಭೆ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ ಮಧ್ಯ ರಾತ್ರಿ ತನಕ ಕಡತಗಳ ಶೋಧ ನಡೆಸಿದರು. ಬಳಿಕ ಹಲವು ಕಡತಗಳನ್ನು ಜಪ್ತಿ ಮಾಡಿದರು. ನಗರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ, ಖಾತೆ ವಿಳಂಬ, ಇ ಸ್ವತ್ತು ವಿಳಂಬದ ಸಾರ್ವಜನಿಕರ ದೂರು ಬಂದ ಹಿನ್ನೆಲೆ ನಗರಸಭೆ ಕಂದಾಯ ಶಾಖೆ, ಆರೋಗ್ಯ ಶಾಖೆ, ತಾಂತ್ರಿಕ ಶಾಖೆಯ ಮೇಲೆ ಲೋಕಾಯುಕ್ತಾ ಅಧಿಕಾರಿಗಳು ದಾಳಿ ನಡೆಸಿದರು.