ನಕಲಿ ಕ್ರಿಮಿನಾಶಕ ಔಷಧಿಗಳ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ವಿಜಯಪುರ ನಗರ ಹೊರಭಾಗದ ಕೆಐಎಡಿಬಿ ಗೋಡಾವನ್ ನಲ್ಲಿ ನಕಲಿ ಔಷಧಿ ತಯಾರಿಕಾ ಘಟಕ ಪತ್ತೆಯಾಗಿದೆ. ನಕಲಿ ಔಷಧಿ ಗೋಡಾವನ್ ನಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುವಾಗ ಇಬ್ಬರು ಆರೋಪಿಗಳ ಬಂಧನ. ವಿದ್ಯಾಸಾಗರ ಮಲ್ಲಾಬಾದಿ (42) ಹಾಗೂ ಅಮರ ರೆಡ್ಡಿ (19) ಬಂಧಿತ ಆರೋಪಿಗಳು. ಬಂಧಿತರಿಂದ 1,36,98,523 ಮೌಲ್ಯದ್ದು ವಶಪಡಿಸಿಕೊಂಡಿದ್ದಾರೆ..