ಕೊಪ್ಪಳ ತಾಲೂಕಿನ ಬಂಡಿ ಗ್ರಾಮದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆಯ ವೇಳೆ, ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಶ್ವಾನವೊಂದು ಮಕ್ಕಳೊಟ್ಟಿಗೆ ರಾಷ್ಟ್ರಗೀತೆಯಲ್ಲಿ ಧ್ವನಿಗೂಡಿಸಿರುವ ಘಟನೆ ನಡೆದಿದೆ. ಸದ್ಯ ಶ್ವಾನ ರಾಷ್ಟ್ರಗೀತೆಗೆ ಧ್ವನಿಗೂಡಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲಾಗುತ್ತಿದ್ದು ಶ್ವಾನಕ್ಕೂ ಕೂಡ ರಾಷ್ಟ್ರಭಕ್ತಿ ಇದೆ ಎಂಬ ಚರ್ಚೆಗಳು ಶುರುವಾಗಿವೆ.