ಗಣಪತಿ ವಿಸರ್ಜನೆ ಅಂಗವಾಗಿ ನಡೆದ ಭರ್ಜರಿ ಮೆರವಣಿಗೆಯಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ಒಂಬತ್ತನೇ ದಿವಸ ವಿಸರ್ಜನೆಗಾಗಿ ಗುರುವಾರ ರಾತ್ರಿ ಮೆರವಣಿಗೆ ಆರಂಭಿಸಿ ಸೆ.5 ರ ಶುಕ್ರವಾರ ಮಧ್ಯಾಹ್ನದವರೆಗೂ ಮೆರವಣಿಗೆ ನಡೆದ ಸಂದರ್ಭದಲ್ಲಿ ಬಂದೋಬಸ್ತ್ ಗೆ ಆಗಮಿಸಿದ್ದ ಪಿಎಸ್ಐ ಮಂಜುನಾಥ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದರು. ಗಜಾನನ ಯುವಕ ಮಂಡಳಿಯ ಯುವಕರು ಪಿಎಸ್ಐ ಡ್ಯಾನ್ಸ್ ಮಾಡುವುದನ್ನು ಕಂಡು ಮತ್ತಷ್ಟು ಹುರಿದುಂಬಿಸಿ ತಾವೂ ಕೂಡ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಪಿಎಸ್ಐ ಕುಣಿದ ವಿಡಿಯೋ ವೈರಲ್ ಆಗುತ್ತಿದೆ.