ಕೊಪ್ಪಳ ಜಿಲ್ಲೆಯ ಬಿ.ಹೊಸಳ್ಳಿ ಗ್ರಾಮದಲ್ಲಿನ ಕೆರೆಯಲ್ಲಿ ಸತ್ತ ಕೋಳಿಗಳನ್ನು ಎಸೆದು ಹೊಗಿದ್ದು ಗ್ರಾಮದ ಜನರ ಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಎದುರಾಗಿದೆ. ಸೆಪ್ಟೆಂಬರ್ 04 ರಂದು ಸಂಜೆ 5-30 ಗಂಟೆಗೆ ಬಿ.ಹೊಸಳ್ಳಿ ಗ್ರಾಮದ ಜನರು ನೂರಾರು ಸತ್ತ ಕೋಳಿಗಳನ್ನು ಕೆರೆಯಲ್ಲಿ ಎಸೆದಿದ್ದರಿಂದ ಕೆರೆಯ ನೀರು ಕಲುಷಿತವಾಗಿದೆ ಮತ್ತು ಕೆರೆಯಲ್ಲಿ ಕೊಳವೆ ಬಾವಿಯಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತದೆ ಮತ್ತು ಇಷ್ಟೊಂದು ಕೋಳಿಗಳನ್ನು ಎಸೆದಿರುವುದು ಸತ್ತಲು ದುರ್ವಾಸನೆ ಬೀರುತ್ತಿದೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಜನರು ಒತ್ತಾಯ ಮಾಡಿದರು