ಹಾವೇರಿ ಜಿಲ್ಲೆಯಲ್ಲಿ ಮಾದಿಗ ಎಸ್ಸಿ ಎಸ್ಟಿ ಸಮುದಾಯದವರು ಸರ್ಕಾರಿ ಸೌಲಭ್ಯ ಪಡೆದುಕೊಳ್ಳದೇ ವಂಚಿತರಾಗಿದ್ದಾರೆ. ದಮನಿತ ಸೇನಾ ಸಮಿತಿ(ಡಿಎಸ್ಎಸ್) ವಂಚಿತರ ಪರ ನಿಂತು ಸೌಲಭ್ಯ ಕಲ್ಪಿಸುತ್ತದೆ ಎಂದು ಸಂಘಟನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಪವಿತ್ರಾ ಜಿ.ಹೇಳಿದರು.. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.