ಚಲಿಸುವ ರೈಲಿಗೆ ಸ್ನೇಹಿತನನ್ನ ತಳ್ಳಿ ಹತ್ಯೆಗೈದಿದ್ದ ಆರೋಪಿಗಳನ್ನ ಬೈಯ್ಯಪ್ಪನಹಳ್ಳಿ ರೈಲ್ವೇ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್ ಎಂಬಾತನನ್ನ ಹತ್ಯೆಗೈದು ಆಕಸ್ಮಿಕ ಸಾವೆಂದು ಕಥೆ ಕಟ್ಟಿದ್ದ ಪುನೀತ್ ಹಾಗೂ ಪ್ರತಾಪ್ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಸೆಪ್ಟೆಂಬರ್ 8ರಂದು ಬೆಳಿಗ್ಗೆ 10 ಗಂಟೆಗೆ ಪೊಲೀಸರು ಮಾಹಿತಿ ನೀಡಿದರು. ಪುನೀತ್ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಫೋನ್‌ನಲ್ಲಿ ಇಸ್ಮಾಯಿಲ್ ಮಾತನಾಡುತ್ತಿದ್ದ. ಇಬ್ಬರ ನಡುವೆ ಜಗಳವಾದಾಗ 2 ದಿನಗಳ ಹಿಂದಷ್ಟೆ ದೊಡ್ಡನೆಕ್ಕುಂದಿ ಬಳಿ ಪುನೀತ್ ನನ್ನ ರೈಲಿಗೆ ತಳ್ಳಲು ಇಸ್ಮಾಯಿಲ್ ಯತ್ನಿಸಿದ್ದ. ಆ ಸಂದರ್ಭದಲ್ಲಿ ತಪ್ಪಿಸಿಕೊಂಡ ಪುನೀತ್, ತಾನೇ ಇಸ್ಮಾಯಿಲ್‌ನನ್ನ ಚಲಿಸುವ ರೈಲಿನತ್ತ ತಳ್ಳಿದ್ದ.