ನಗರಸಭೆಯಿಂದ ಅಕ್ರಮ ಮಳಿಗೆಗಳ ತೆರವು ಕೆಜಿಎಫ್ ಪಟ್ಟಣದ ನ್ಯಾಯಾಲಯದ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ತೆರವುಗೊಳಿಸಿದ್ದಾರೆ ರಾಬರ್ಟ್ ಸೆಂಟ್ ಪೇಟೆ ನಗರಸಭೆ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಈಗಿನ ನ್ಯಾಯಾಲಯದ ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮತ್ತು ಆಯುಕ್ತ ಆಂಜನೇಯಲು ಅವರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು