ಚಿಕ್ಕಬಳ್ಳಾಪುರ ತಾಲ್ಲೂಕಿನ ಕೌರನಹಳ್ಳಿ ಇಶಾ ಪೌಂಡೇಶನ್ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ಸಚಿವರಾದ ವಿ.ಸೋಮಣ್ಣ ಹಾಗು ಚಿಕ್ಕಬಳ್ಳಾಪುರ ಸಂಸದರಾದ ಡಾ ಕೆ ಸುಧಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಸುಧಾಕರ್ ರವರು, ಜಿಎಸ್ ಟಿ ಕಡಿಮೆ ಮಾಡಿ ನಮ್ಮ ಸರ್ಕಾರವು ಬಡವರ ಪರವಾಗಿದೆ. ಇದರಿಂದ ವಹಿವಾಟು ಹೆಚ್ಚಾಗುತ್ತದೆ. ಆದರೆ ಇದನ್ನು ರಾಜ್ಯ ಸರ್ಕಾರವು ಸ್ವಾಗತಿಸುವ ಬದಲು ಆದಾಯ ಕಡಿಮೆಯಾಗುತ್ತದೆ ಎಂದು ವಿರೋಧ ಮಾಡುತ್ತಿದೆ.ಇವರು ಬಡವರ ಪರವಾಗಿದ್ದಾರೆಯೇ? ಅಥವಾ ಆದಾಯದ ನೋಡಿಕೊಳ್ಳುತ್ತಾರೆಯೋ ಎಂದು ಪ್ರಶ್ನಿಸಿದರು.