ಕೊಪ್ಪಳ ಜಿಲೆ, ಮುನಿರಬಾದ ಠಾಣಾ ವ್ಯಾಪ್ತಿಯ ಕೂಕನಪಳ್ಳಿ, ಸಂತೆಯಲ್ಲಿ ಹಿರೋ ಕಂಪನಿಯ ಸೈಂಡರ್ ಸಿಲ್ವರ ಮತ್ತು ನೀಲಿ ಮಿಶ್ರಿತ ಬಣ್ಣದ ಮೋಟರ್ ಸೈಕಲ್ 50..50,000 ಬೆಲೆ ಬಾಳುವುದನ್ನು ಕಳ್ಳತನದ ಬಗ್ಗೆ ಬಾಳಪ್ಪ ತಂದೆ ಹನುಮಪ್ಪ ಸಿಂದೋಗಿ ಪಿರ್ಯಾದಿ ನೀಡಿದ್ದು ಮೇಲಿಂದ ಮುನಿರಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಶರಣಪ್ಪ ತಂದೆ ಇಂದ್ರೇಪ್ಪ ಮರಳಿ ವಯಾ 26 ವರ್ಷ ಉ: ಕೂಲಿಕೆಲಸ ಸಾ: ಉಡಮಕಲ್ ಕೂಕನಪಳ್ಳಿ, ಸಿಂಧನೂರ, ಕಂಪಿ, ಹೊಸಪೇಟೆ, ಹುಲಗಿ, ಕುಷ್ಟಗಿ ಕೊಪ್ಪಳನಗರದಲ್ಲಿ ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವದಾಗಿ ಹೇಳಿದ್ದಾನೆ