ಹನುಮಂತನಗರದ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಾಣ ಮಾಡಿರುವ ಸ್ಕೈವಾಕ್ ನ ಮುಂದುವರೆದ ಕಾಮಗಾರಿ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಸೂಚನೆ ನೀಡಬೇಕೆಂದು ವೀರಶೈವ ಮಹಾಸಭದ ಜಿಲ್ಲಾಧ್ಯಕ್ಷ ಹೆಚ್. ಎಸ್.ಯೋಗಾನಂದ ಒತ್ತಾಯಿಸಿದರು. ಹನುಮಂತನಗರದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹನುಮಂತನಗರದ ಬಳಿ ಸ್ಕೈವಾಕ್ ನಿರ್ಮಾಣ ಮಾಡುವುದು ಬಾಲಣ್ಣ ಅವರ ಕನಸಿನ ಕೂಸಾಗಿತ್ತು. ಅದರಂತೆ ಶಾಸಕರ ಸಹಕಾರದಲ್ಲಿ ಸ್ಕೈವಾಕ್ ನಿರ್ಮಾಣ ಹಂತದಲ್ಲಿದ್ದು ಶೇ. 90 ರಷ್ಟು ಕೆಲಸ ಪೂರ್ಣ ವಾಗಿದ್ದು, ಉಳಿದಿರುವ 10% ಕೆಲಸವನ್ನು ತ್ವರಿತವಾಗಿ ಪೂರ್ಣ ಗೊಳಿಸಬೇಕಿದೆ ಎಂದರು.