ಬೆಳೆ ಹಾನಿಗೆ ಮನನೊಂದು ತಾಲೂಕಿನ ಹುನಗುಂಡಿ ಗ್ರಾಮದ ರೈತ ಸಿದ್ದಲಿಂಗಯ್ಯ ವಸ್ತ್ರದ (50) ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಹೊಳೆಆಲೂರ ಕೆವಿಜಿ ಬ್ಯಾಂಕ್ ನಲ್ಲಿ 4 ಲಕ್ಷ ಕೃಷಿ ಸಾಲ, ಸಹಕಾರಿ ಸೇವಾ ಸಂಘದಲ್ಲಿ ₹ 80 ಸಾವಿರ ಸಾಲ, ಈ 2.50 ಲಕ್ಷ ಚಿನ್ನದ ಸಾಲ, ಟ್ರ್ಯಾಕ್ಟರಿಗೆ ಈ 1.50 ಲಕ್ಷ ಸಾಲ. ಹೀಗೆ ವಿವಿಧ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ. ನಿರಂತರ ಮಳೆಯಿಂದ ಬೆಳೆ ಹಾನಿಯಾಗಿ ಕಂಗಾಲಾಗಿದ್ದ ರೈತ ಸಿದ್ದಲಿಂಗಯ್ಯ ವಸ್ತ್ರದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ರೈತನ ಪತ್ನಿ ಶಾಂತಾ ವಸ್ತ್ರದ ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.