ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಿವಾಸದ ಮೇಲಿನ ಇಡಿ ಅಧಿಕಾರಿಗಳ ದಾಳಿ ಮಂಗಳವಾರ ರಾತ್ರಿ 8 ಗಂಟೆಗೆ ಮುಕ್ತಾಯವಾಗಿದೆ. ಚಳ್ಳಕೆರೆ ನಗರದ ಹಳೆಟೌನ್ ಬಡಾವಣೆಯಲ್ಲಿನ ಶಾಸಕ ವೀರೇಂದ್ರ ಪಪ್ಪಿ ನಿವಾಸದ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಆರು ಕಾರುಗಳನ್ನ ಜಪ್ತಿ ಮಾಡಿ ಬೆಂಗಳೂರು ಇಡಿ ಕಚೇರಿಗೆ ಕೊಂಡೊಯ್ದಿದ್ದಾರೆ. ಅಲ್ಲದೆ ನಗರದ ಕೊಟೇಕ್ ಮಹೇಂದ್ರ ಬ್ಯಾಂಕ್ , ಆಕ್ಸಿಸ್ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಸೇರಿ ಹಲವು ಕಡೆ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಆರು ವಾಹನಗಳಲ್ಲಿ ಡ್ರೈವರ್ ಗಳ ಸಮೇತ ಬಂದಿದ್ದ ಅಧಿಕಾರಿಗಳು ಆರ್ ಡಿ, ಇನ್ನೋವಾ, ಸ್ಕಾರ್ಪಿಯೋ ಸೇರಿ ಆರು ವಾಹನ ಜಪ್ತಿ ಮಾಡಿದ್ದಾರೆ