ಗೊಲ್ಲರಹಟ್ಟಿಯಲ್ಲಿ ಗಣೇಶ ಮೆರವಣಿಗೆಯಲ್ಲಿ ಡಿ.ಜೆ ಬಳಕೆ: ಡಿಜೆ ವಶ, ಮೂವರ ವಿರುದ್ಧ ದೂರು ದಾಖಲು ದಾವಣಗೆರೆ ತಾಲ್ಲೂಕಿನ ಗೊಲ್ಲರಹಟ್ಟಿಯಲ್ಲಿ ಶನಿವಾರ ರಾತ್ರಿ 1 ಗಂಟೆಗೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡಿದ ಸಂಬಂಧ ಮೂವರು ವಿರುದ್ಧ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಡಿಕೆ ಬಳಕೆ ನಿಷೇಧವಿದ್ದರೂ ಗೊಲ್ಲರಹಟ್ಟಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡಿದ ಸಂಬಂಧ ಗ್ರಾಮಾಂತರ ಠಾಣಾ ಪೊಲೀಸರು ಡಿಜೆ ಲಾರಿಯನ್ನು ವಶಕ್ಕೆ ಪಡೆದು ಮೂವರು ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.